Sunday, October 3, 2010

ತಿಮ್ಮಿ ಒಂದು ಅಪರೂಪದ ಸಂಗಾತಿ.

ತಿಮ್ಮಿ  ಒಂದು ನಾಯಿಯಾದರು  ಅಪರೂಪದ ನಂಬಿಕಸ್ತ  ಪ್ರಾಣಿ .ಹೆಸರಘಟ್ಟ ರಾಜ್ಯಜಾನುವಾರು ಸಂವರ್ಧನಾ  ಮತ್ತು ತರಬೇತಿ ಕೇಂದ್ರಕ್ಕೆ ಬೇಟಿ ನೀಡಿ ಇದಕ್ಕೆ ಪರಿಚಯ ವಾದರೆ  ಅದುತೋರಿಸುವ ಪ್ರೀತಿ  ಸ್ವಾಮಿ ನಿಷ್ಟೆ ಬಣ್ಣಿಸಲು ಅಸಾದ್ಯ .ಒಮ್ಮೆ ಅದಕ್ಕೆ ಸ್ವಲ್ಪ ತಿಂಡಿ ನೀಡಿ ಅದರ ಪ್ರೀತಿ ಗಳಸಿದರೆ ಅದುಮರಿಯದೆ ಅದನ್ನು ಬೇಟಿ ಯಾದಾಗಲೆಲ್ಲ ಬಾಲವನ್ನು ಆಡಿಸುತ್ತಾ ಸ್ವಾಗತಿಸುತ್ತದೆ .

   ಇದು ಈ ಫಾರಂ ಗೆ ಬಂದು ಸುಮಾರು ೮ ವರ್ಷಗಳು ಕಳೆದಿರಬಹುದು .ಅಂದಿನಿಂದ  ಈ ಫಾರಂನ ಅವಿಬಾಜ್ಯ ಅಂಗವಾಗಿ ಒಂದು ನಿಷ್ಟೆಯ  ಸೇವಕನಾಗಿ ಹಗಲಿರಳು ಕಾವಲು ಕಾಯುತ್ತಿತ್ತು .ಇದಕ್ಕೆ ಊಟ ಹಾಕಲಿ ,ಹಾಕದಿರಲಿ ಅದು ಎಲ್ಲೂ ಹೋಗದೆ ಇಲ್ಲಿಯೇ ಇರುತಿತ್ತು .ಅದು ಎಂದೂ
 ನಮ್ಮಿಂದ ಆಹಾರವನ್ನು ಕಸಿದುಕೊಳ್ಳದೆ ನಾವಾಗಿಯೇ ಹಾಕಿದರೆ ಮಾತ್ರ ತಿನ್ನುತ್ತಿತ್ತು .ಅದಕ್ಕೆ ಹಸಿವಾದಾಗ ಆಪ್ತರಹತ್ತಿರ ಹೋಗಿ ತಿಂಡಿ ಕೊಡಿ ಎಂದೂ ಆವ ಬಾವ ಪ್ರದರ್ಶಿಸಿ ಕುಯುಮ್ಗುಡುವ ಪರಿ ಬಣ್ಣಿಸಲು ಅಸಾದ್ಯ .ರಾತ್ರಿಯ ಸಮಯದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದರೆ ಎಲ್ಲಿಂದಲೋ ಬಂದು ನಮ್ಮನ್ನು ಸೇರಿ ನಾನುನಿಮ್ಮಜೋತೆಗಿರುತ್ತೇನೆ ಎಂದು ಬಾಲವನ್ನು ಅಲ್ಲಾಡಿಸುತ್ತಾ ನಮ್ಮೊಂದಿಗೆ ಬರುತಿತ್ತು !,ಹೀಗೆ ಅದು ಒಂದು ನಂಬಿಕಸ್ತ ಸೇವಕನಂತೆ ವರ್ತಿಸುತಿತ್ತು .
 ಇದು ಗರ್ಭ ದರಿಸಿದ ನಂತರ ತನ್ನ ಹೊಟ್ಟೆಯಲ್ಲಿರುವ ಬೆಳೆಯುವ ಮರಿಗಳ ಪ್ರಬಾವದಿಂದಾಗಿ ಹಾಲನ್ನು ಕುಡಿಯುವ ಬಯಕೆ ಯಾಗುತಿತ್ತೇನೋ  ; ಅದಕ್ಕೆ ಅದು ಹಾಲುಕರೆಯುವಸಮಯದಲ್ಲಿ ಡೈರಿ ನಾನಿದ್ದರೇಮಾತ್ರ ಹತ್ತಿರ ಬಂದು  ಹಾಲುಹಾಕು ಎಂದು ಬಾಲ ಅಲ್ಲಾಡಿಸುತ್ತ ಕುಯುಮಗುಡುವಮೂಲಕ ಕೆಳುತಿತ್ತೆವಿನಹ  ಕ್ಯಾನಿನಲ್ಲಿರುವ ಹಾಲಿಗೆ ಎಂದೂ ಬಾಯಿ ಹಾಕುತ್ತಿರಲಿಲ್ಲ .ಇದನ್ನುನೋದಿಯೇ ನಾನು ಹಾಲು ಹಾಕಿಸುತಿದ್ದೆ !.
 ಇದು ಮರಿಹಾಕಿದನಂತರ ಹೆಚ್ಚಿಗೆ ಮರಿಗಳ ಹತ್ತಿರವೇ ಇದ್ದು ಹಸಿವಾದಾಗಮಾತ್ರ  ಪ್ರಶಾಂತ್ ಹತ್ತಿರ ಇಲ್ಲದಿದ್ದರೆ ನನ್ನಹತ್ತಿರ ಬರುತಿತ್ತು .ಆಗ ಸ್ವಲ್ಪ ತಿಂಡಿ ಹಾಕಿದರೆ ತಿಂದು ಅದುಸಾಲದಿದ್ದರೆ  ಚಂದ್ರಕಲಾರವರಮನೆ  ,ಅಥವಾ ತನಗೆ ಪ್ರಿಯರಾದವರ ಮನೆಯ ಹತ್ತಿರ ಹೋಗಿ   
ನಿಂತರೆ ಅವರೇ ಇದನ್ನು ಕೂಗಿ ಊಟ ಹಾಕುತಿದ್ದರು .ಅಷ್ಟು ಅದು ಜನಮೆಚ್ಚಿಕೆಯನ್ನ ಗಳಿಸಿತ್ತು .
   ಅದರಮರಿಗಳಿಗೆ ಎಷ್ಟು ಬೇಡಿಕೆ ಇತ್ತೆಂದರೆ , ಮರಿಹಾಕಿದ ಸ್ವಲ್ಪ ದಿನದಲ್ಲಿಯೇ ಎಲ್ಲವನ್ನು ತೆಗೆದುಕೊಂಡು ಹೋಗುತಿದ್ದರು .ಇದರಮರಿಗಳನ್ನ್ನು ಮಾರಿ ಅನೇಕರು ದುದ್ದುಮಾದಿಕೊಂದಿದ್ದಾರೆ .
         ಹೀಗೆ ಎಲ್ಲರಿಗೆ ಪ್ರೀತಿಪಾತ್ರವಾಗಿದ್ದು ಈ ಫಾರಂ ನ ಅವಿಬಾಜ್ಯ ಅಂಗದಂತಿದ್ದ ಆ ಪ್ರಾಣಿಸ್ನೇಹಿತನ ಮರಣಸುದ್ದಿಯನ್ನು ನನ್ನಸ್ನೇಹಿತನ SMS  ಮುಖಾಂತರ ತಿಳಿದೊಡನೆಯೇ ನನ್ನಹೊಟ್ಟೆಯಲ್ಲಿ ಬೆಂಕಿಹಾಕಿದ ಅನುಭವ ವಾಗಿ  ಸ್ವಂತದವರನ್ನು ಕಳೆದುಕೊಂದಹಾಗೆ ಬಹಳ ನೋವಾಯಿತು .ಈಗಲೂ   ಅದುಇರುತಿದ್ದ ಜಾಗಗಳ ಹತ್ತಿರ ಹೋದಾಗ ಏನೋ ಕಳದುಕೊಂಡ ಹಾಗೆ ಆಗುತ್ತದೆ .
 "ನಾನು ದೇವರಲ್ಲಿ ಬೇಡುವುದು ಇಸ್ಟೇ !?,ಇಂತ ನಿಸ್ವಾರ್ತಕ ಜೀವನ ನಡೆಸಿ ನಮ್ಮೊಂದಿಗೆ ಇದ್ದ ನಿನ್ನ ಆತ್ಮಕೆ ಚಿರಶಾಂತಿ ನೀಡಲಿ ಎಂದು "