
ಇದು ಈ ಫಾರಂ ಗೆ ಬಂದು ಸುಮಾರು ೮ ವರ್ಷಗಳು ಕಳೆದಿರಬಹುದು .ಅಂದಿನಿಂದ ಈ ಫಾರಂನ ಅವಿಬಾಜ್ಯ ಅಂಗವಾಗಿ ಒಂದು ನಿಷ್ಟೆಯ ಸೇವಕನಾಗಿ ಹಗಲಿರಳು ಕಾವಲು ಕಾಯುತ್ತಿತ್ತು .ಇದಕ್ಕೆ ಊಟ ಹಾಕಲಿ ,ಹಾಕದಿರಲಿ ಅದು ಎಲ್ಲೂ ಹೋಗದೆ ಇಲ್ಲಿಯೇ ಇರುತಿತ್ತು .ಅದು ಎಂದೂ
ನಮ್ಮಿಂದ ಆಹಾರವನ್ನು ಕಸಿದುಕೊಳ್ಳದೆ ನಾವಾಗಿಯೇ ಹಾಕಿದರೆ ಮಾತ್ರ ತಿನ್ನುತ್ತಿತ್ತು .ಅದಕ್ಕೆ ಹಸಿವಾದಾಗ ಆಪ್ತರಹತ್ತಿರ ಹೋಗಿ ತಿಂಡಿ ಕೊಡಿ ಎಂದೂ ಆವ ಬಾವ ಪ್ರದರ್ಶಿಸಿ ಕುಯುಮ್ಗುಡುವ ಪರಿ ಬಣ್ಣಿಸಲು ಅಸಾದ್ಯ .ರಾತ್ರಿಯ ಸಮಯದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದರೆ ಎಲ್ಲಿಂದಲೋ ಬಂದು ನಮ್ಮನ್ನು ಸೇರಿ ನಾನುನಿಮ್ಮಜೋತೆಗಿರುತ್ತೇನೆ ಎಂದು ಬಾಲವನ್ನು ಅಲ್ಲಾಡಿಸುತ್ತಾ ನಮ್ಮೊಂದಿಗೆ ಬರುತಿತ್ತು !,ಹೀಗೆ ಅದು ಒಂದು ನಂಬಿಕಸ್ತ ಸೇವಕನಂತೆ ವರ್ತಿಸುತಿತ್ತು .
ಇದು ಗರ್ಭ ದರಿಸಿದ ನಂತರ ತನ್ನ ಹೊಟ್ಟೆಯಲ್ಲಿರುವ ಬೆಳೆಯುವ ಮರಿಗಳ ಪ್ರಬಾವದಿಂದಾಗಿ ಹಾಲನ್ನು ಕುಡಿಯುವ ಬಯಕೆ ಯಾಗುತಿತ್ತೇನೋ ; ಅದಕ್ಕೆ ಅದು ಹಾಲುಕರೆಯುವಸಮಯದಲ್ಲಿ ಡೈರಿ ನಾನಿದ್ದರೇಮಾತ್ರ ಹತ್ತಿರ ಬಂದು ಹಾಲುಹಾಕು ಎಂದು ಬಾಲ ಅಲ್ಲಾಡಿಸುತ್ತ ಕುಯುಮಗುಡುವಮೂಲಕ ಕೆಳುತಿತ್ತೆವಿನಹ ಕ್ಯಾನಿನಲ್ಲಿರುವ ಹಾಲಿಗೆ ಎಂದೂ ಬಾಯಿ ಹಾಕುತ್ತಿರಲಿಲ್ಲ .ಇದನ್ನುನೋದಿಯೇ ನಾನು ಹಾಲು ಹಾಕಿಸುತಿದ್ದೆ !.
ಇದು ಮರಿಹಾಕಿದನಂತರ ಹೆಚ್ಚಿಗೆ ಮರಿಗಳ ಹತ್ತಿರವೇ ಇದ್ದು ಹಸಿವಾದಾಗಮಾತ್ರ ಪ್ರಶಾಂತ್ ಹತ್ತಿರ ಇಲ್ಲದಿದ್ದರೆ ನನ್ನಹತ್ತಿರ ಬರುತಿತ್ತು .ಆಗ ಸ್ವಲ್ಪ ತಿಂಡಿ ಹಾಕಿದರೆ ತಿಂದು ಅದುಸಾಲದಿದ್ದರೆ ಚಂದ್ರಕಲಾರವರಮನೆ ,ಅಥವಾ ತನಗೆ ಪ್ರಿಯರಾದವರ ಮನೆಯ ಹತ್ತಿರ ಹೋಗಿ
ನಿಂತರೆ ಅವರೇ ಇದನ್ನು ಕೂಗಿ ಊಟ ಹಾಕುತಿದ್ದರು .ಅಷ್ಟು ಅದು ಜನಮೆಚ್ಚಿಕೆಯನ್ನ ಗಳಿಸಿತ್ತು .
ಅದರಮರಿಗಳಿಗೆ ಎಷ್ಟು ಬೇಡಿಕೆ ಇತ್ತೆಂದರೆ , ಮರಿಹಾಕಿದ ಸ್ವಲ್ಪ ದಿನದಲ್ಲಿಯೇ ಎಲ್ಲವನ್ನು ತೆಗೆದುಕೊಂಡು ಹೋಗುತಿದ್ದರು .ಇದರಮರಿಗಳನ್ನ್ನು ಮಾರಿ ಅನೇಕರು ದುದ್ದುಮಾದಿಕೊಂದಿದ್ದಾರೆ .
ಹೀಗೆ ಎಲ್ಲರಿಗೆ ಪ್ರೀತಿಪಾತ್ರವಾಗಿದ್ದು ಈ ಫಾರಂ ನ ಅವಿಬಾಜ್ಯ ಅಂಗದಂತಿದ್ದ ಆ ಪ್ರಾಣಿಸ್ನೇಹಿತನ ಮರಣಸುದ್ದಿಯನ್ನು ನನ್ನಸ್ನೇಹಿತನ SMS ಮುಖಾಂತರ ತಿಳಿದೊಡನೆಯೇ ನನ್ನಹೊಟ್ಟೆಯಲ್ಲಿ ಬೆಂಕಿಹಾಕಿದ ಅನುಭವ ವಾಗಿ ಸ್ವಂತದವರನ್ನು ಕಳೆದುಕೊಂದಹಾಗೆ ಬಹಳ ನೋವಾಯಿತು .ಈಗಲೂ ಅದುಇರುತಿದ್ದ ಜಾಗಗಳ ಹತ್ತಿರ ಹೋದಾಗ ಏನೋ ಕಳದುಕೊಂಡ ಹಾಗೆ ಆಗುತ್ತದೆ .
"ನಾನು ದೇವರಲ್ಲಿ ಬೇಡುವುದು ಇಸ್ಟೇ !?,ಇಂತ ನಿಸ್ವಾರ್ತಕ ಜೀವನ ನಡೆಸಿ ನಮ್ಮೊಂದಿಗೆ ಇದ್ದ ನಿನ್ನ ಆತ್ಮಕೆ ಚಿರಶಾಂತಿ ನೀಡಲಿ ಎಂದು "
ತಿಮ್ಮಿಯ ಬಗ್ಗೆ ಅತ್ಯಂತ ನೈಜವಾಗಿ ಬರೆದಿದ್ದೀರಿ ಸರ್. ತಿಮ್ಮಿಯ ಅಗಲಿಕೆ ನಮ್ಮೆಲ್ಲರ ಮೇಲೂ ತುಂಬಾ ಪರಿಣಾಮ ಬೀರಿರುವುದಂತೂ ಸತ್ಯ. ತಿಮ್ಮಿಯನ್ನು 'ಸಂಗಾತಿ' ಎಂದು ಕರೆದವರು ಅಪರೂಪ, ಇದು ನಿಮ್ಮ ಮಾನವೀಯತೆಯನ್ನು ಎತ್ತಿ ತೋರುತ್ತದೆ ಸರ್.
ReplyDeleteಹೌದು ,ಪ್ರಶಾಂತ್ ....ನಾವೇ ಅಲ್ಲಾ, ! ಯಾರು ಅದನ್ನು ಎಂದಿಗೂ ಮರೆಯಲು ಸಾದ್ಯವಿಲ್ಲಾ !!!.ಇಲ್ಲಿಗೆ ಬೇಟಿ ನೀಡಿದ್ದ ಗೋವಾದವರು ಮತ್ತು ಇಂಟರ್ನ್ಶಿಪ್ ವಿದ್ಯಾರ್ತಿಗಳು ಮತ್ತೆ ಬಂದರೆ ಇದನ್ನು ಹುಡುಕದೆ ಕೇಳದೆ ಇರರು .ಅಷ್ಟರಮಟ್ಟಿಗೆ ಅದು ಚಿರಪರಿಚಿತವಾಗಿತ್ತು .ಸದಾ ನಮ್ಮೊದನಿದ್ದ ಅದನ್ನು ಪ್ರಾಣಿ ಸಂಗಾತಿ ಎಂದು ಕರೆಯುವದಲ್ಲಿ ಏನೂ ತಪ್ಪಿಲ್ಲ ಎಂದು ನನ್ನ ಅನಸಿಕೆ.
ReplyDeleteನಿಮ್ಮ ಸ೦ಗಾತಿ ತಿಮ್ಮಿಯ ಬಗ್ಗೆ ಓದುವಾಗ ನಮ್ಮ ಜಿಮ್ಮಿಯ ಹೋಲಿಕೆ ಕ೦ಡುಬರುತ್ತಿದೆ. ನಿಮ್ಮ ಮನಸ್ಸು ಮಾನವೀಯ ಗುಣಗಳಿ೦ದ ಸ೦ಪದ್ಭರಿತವಾಗಿದೆ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಬನ್ನಿ.
ReplyDeletewww.firstpostkannada.com
ReplyDelete